ರಾಜಕೀಯಕ್ಕೊಂದು ರೂಪ ಕೊಡಿ.
2018ರಲ್ಲಿ ಬರುವ ವಿಧಾನಸಭಾ ಚುನಾವಣೆಯ ಅಖಾಡ. ಕರ್ನಾಟಕ ರಾಜ್ಯದ ರಾಜಕೀಯ ದಿಕ್ಕು ಸಂಪೂರ್ಣವಾಗಿ ಬದಲಾಗುವ ಸಮಯ.ಇಲ್ಲಿಯ ತನಕ ಯಾವುದೇ ವಿಷೇಶತೆ ಕಂಡಿರದೇ ಇದ್ದದ್ದು ವಿಷೇಶವೇನಲ್ಲ. ಆದರೆ ಬರುವ ಚುನಾವಣಾ ಅಖಾಡ ವಿಷೇಶವಾಗಿರುವುದರಲ್ಲಿ ಸಂದೇಹವಿಲ್ಲ.ಕಾರಣ ಜನಸಾಮಾನ್ಯರ (ಆಮ್ ಆದ್ಮಿ) ಸಹಭಾಗಿತ್ವ.ಎಲ್ಲ ರಾಜಕೀಯ ಪಕ್ಷಗಳು ತಮ್ಮ ಚಟುವಟಿಕೆಗಳನ್ನು ಬಿರುಸುಗೊಳಿಸಿವೆ.ಒಂದು ಕಡೆ ಹಿಂದ ಸಂಘಟನೆ,ಇನ್ನೊಂದು ಕಡೆ ಅಹಿಂದ,ಮತ್ತೊಂದು ಕಡೆ ಇವರ ರಾಜಕೀಯ ಇತಿಹಾಸ,ಅಧಿಕಾರದ ದಾಹ, ಹಗರಣಗಳು,ಇತ್ಯಾದಿಗಳು ಒಂದು ಕಡೆಯಾದರೆ ಇನ್ನೊಂದು ಕಡೆ ಜನಸಾಮಾನ್ಯ ಸ್ವತಃ ತಾನೇ ರಾಜಕೀಯದಲ್ಲಿ ಸಹಭಾಗಿತ್ವದ ಅಭಿಯಾನ ಆರಂಭಿಸಿದ್ದಾನೆ.ನಿಜವಾಗಲೂ ಜನಸಾಮಾನ್ಯರು ಸಂಪೂರ್ಣ ಸಹಭಾಗಿತ್ವ ವಹಿಸಿದ್ದೇ ಆದರೆ ಸಮಾಜದಲ್ಲಿ ಅರಿವಿನ ದಿಗಂತದಲ್ಲಿ ಹೊಸ ಕಿರಣ ಮೂಡಿದಂತೆ.
ರಾಜಕೀಯ ಮತ್ತು ಅರಾಜಕೀಯದ ಮಧ್ಯ,ಅಧಿಕಾರಶಾಹಿ ಮತ್ತು ಅಧಿಕಾರದ ದಬ್ಬಾಳಿಕೆ ಸಹಿಸಿದವರ ಮಧ್ಯ, ಸೆಣಸಾಟ ಆರಂಭವಾದಂತೆ. ಇದಕ್ಕಾಗಿ ಭಾರತಕ್ಕೆ ಒಂದು ವಿದ್ಯಾವಂತ ರಾಜಕೀಯ ವರ್ಗದ ಅಗತ್ಯ ಇದೆ. ಯುವಕರ ಪ್ರಾಬಲ್ಯವಿರುವ ನಮ್ಮ ದೇಶದಲ್ಲಿ ಪ್ರಜ್ನಾವಂತ ಯುವಕರು ಭಾಗಿಯಾಗುವುದು ಒಳಿತು.ಯುವ ವರ್ಗವು ಹೊಸ ಆಲೋಚನೆಗಳೊಂದಿಗೆ,ಹೊಸ ಹೊಣೆಗಾರಿಕೆಯೊಂದಿಗೆ ಮುಂದೆ ಬಂದು ದೇಶದಲ್ಲಿ ಅಭ್ಯುದಯಕ್ಕಾಗಿ ಹೊಸ ರಾಜಕೀಯವನ್ನು ಸ್ಥಾಪಿಸಬೇಕು. ದೇಶದಲ್ಲಿ ನಮ್ಮ ಹೊಣೆಗಾರಿಕೆಯನ್ನು ಅರಿಯಬೇಕು ಅದು ಪರಿವರ್ತನೆಗೆ ಪ್ರಶಸ್ತವಾದ ಮಾರ್ಗವಾಗುತ್ತದೆ.ಈ ಸಂಧರ್ಭದಲ್ಲಿ ಕಲಾಂ ಅವರ ರಾಷ್ಟ್ರಕ್ಕೆ ನಾನೇನು ಕೊಡಬಹುದು? ಅನ್ನುವ ಅಧ್ಯಾಯ ನೆನಪಿಗೆ ಬರುತ್ತದೆ. ಅದರಲ್ಲಿ ವಿಸ್ತಾರವಾದ ವಿವರಣೆ ಇದೆ.
ಪರಿವರ್ತನೆಯ ಬುನಾದಿಯಾಗಿ ಯುವಕರು ಆಲೋಚನೆಗಳನ್ನು ರಾಜಕೀಯವಾಗಿ ರೂಪಿಸಬೇಕು ಆಲೋಚನೆಗಳು ಜನಪರವಾಗಿರಬೇಕು. ಯಾಕಂದ್ರೆ ರಾಷ್ಟ್ರವೂ ಒಬ್ಬ ವ್ಯಕ್ತಿಯ ಹಾಗೆ ಕೆಲವು ಮೌಲ್ಯಗಳನ್ನು ಹೊಂದಿರುತ್ತದೆ. ಅವು ಅತಿ ಮಹತ್ವಪೂರ್ಣವಾದವೂ ಆಗಿರುತ್ತವೆ.ರಾಷ್ಟ್ರ ಆರಾಧನೆಯು ನಮ್ಮಲ್ಲಿ ಒಂದು ಮೌಲ್ಯವಾಗಬೇಕು.ಅದಕ್ಕಿಂತ ಹೆಚ್ಚಾಗಿ ಅದು ನಮ್ಮ ಗುಣವೇ ಆಗಿರಬೇಕು.ನನ್ನ ಎಲ್ಲ ಮಾತುಗಳ ಸಾರ ಒಂದೆ ಅದು ದೇಶದ ಕೆಲಸದಲ್ಲಿ ನಮ್ಮ ಪಾತ್ರ.
ಇನ್ನು ನನ್ನ ಸ್ಪಷ್ಟ ಉದ್ದೇಶ ಎನೆಂದರೆ ಜನಸಾಮಾನ್ಯರ ಸಹಭಾಗಿತ್ವದಿಂದ ರಾಜಕೀಯ ಬದಲಾವಣೆಯ ಅಭಿಯಾನ ಆರಂಭಿಸಿರುವ ಆಮ್ ಆದ್ಮಿ ಪಕ್ಷ, ದೇಶದ ರಾಜಧಾನಿಯನ್ನು ವಶಪಡಿಸಿಕೊಂಡು, ದೂರದ ಗೋವಾ,ಪಕ್ಕದ ಪಂಜಾಬ್ ರಾಜ್ಯಗಳಲ್ಲಿ ತನ್ನ ಅಭಿಯಾನದೊಂದಿಗೆ ತನ್ನ ಬುನಾದಿಯನ್ನು ಭದ್ರ ಪಡಿಸಿಕೊಂಡು,ಕರ್ನಾಟಕದಲ್ಲಿ ರಣ ಕಹಳೆ ಮೊಳಗಿಸಿದೆ. ಮುಂಬರುವ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಜನಸಾಮಾನ್ಯನನ್ನೇ ಪ್ರತಿನಿಧಿಯಾಗಿಸುವುದು ಪಕ್ಷದ ಧೇಯವಾಗಿದೆ. ಗ್ರಾಮ,ತಾಲ್ಲೂಕು,ಜಿಲ್ಲೆ ಎಲ್ಲ ಸ್ತರಗಳಲ್ಲಿ ಪ್ರಾಮಾಣಿಕ, ಸಾಮಾಜಿಕ,ರಾಜಕೀಯ, ಬದ್ದತೆಯುಳ್ಳ, ಮೌಲ್ಯಾಧಾರಿತ ಮುಖಗಳು ಕಾಣಿಸಿಕೊಳ್ಳವ ಅಗತ್ಯವಿದೆ. ಯಾಕಂದ್ರೆ ದೇಶವು ಸುಭದ್ರವಾಗಿರಬೇಕೆಂದರೆ ರಾಜಕೀಯದಲ್ಲಿ ಜನಸಾಮಾನ್ಯರಲ್ಲಿಯ ಜನಸಾಮಾನ್ಯನೇ ಮುಂದೆ ಬರಬೇಕು.ಅವರ ಬೆಂಬಲವಾಗಿ ಎಲ್ಲ ಜನಸಾಮಾನ್ಯರು ಇರಬೇಕು. ಜನಸಾಮಾನ್ಯರ ಸಹಭಾಗಿತ್ವದಲ್ಲಿ ರಾಜಕೀಯ ಬದಲಾವಣೆಗೆ ನಾಂದಿ ಹಾಡಬಹುದು.
- ನಿಯಾಜ್ ಶೇಖ್

No comments:
Post a Comment