Sunday, 23 February 2020

ಹಾನಗಲ್ಲ ನಗರದ ಹಳೇ ಬಸ್ ನಿಲ್ದಾಣದ ಹತ್ತಿರ ಅಸಂಘಟಿತ ಕಾರ್ಮಿಕರ ಜಾಗೃತಿ ಅಭಿಯಾನ* ನಿಯಾಜ್ ಶೇಖ್

*ಹಾನಗಲ್ಲ ನಗರದ ಹಳೇ ಬಸ್ ನಿಲ್ದಾಣದ ಹತ್ತಿರ ಅಸಂಘಟಿತ ಕಾರ್ಮಿಕರ ಜಾಗೃತಿ ಅಭಿಯಾನ*

 ಇದು ಬಡವರ ಅಭಿಯಾನ. ಬೆವರನ್ನು ಸುರಿಸಿ ದುಡಿಯುವ ಜನರ ಬೆವರಿನ ಪಾಲನು ಕೇಳುವ ಅಭಿಯಾನ,  ತುಂಡು ಭೂಮಿ, ಚಿಕ್ಕ ಮನೆ, ಮಕ್ಕಳ ಶಿಕ್ಷಣ, ಕುಟುಂಬದ ಆರೋಗ್ಯ, ಕಾರ್ಮಿಕರ ಕಲ್ಯಾಣಕ್ಕಾಗಿ ಹಾಗೂ ಸರ್ಕಾರದ ಸೌಲಭ್ಯಗಳನ್ನು ದುಡಿಯುವ ವರ್ಗದ ಪ್ರತಿ ಬಡವನಿಗೆ ತಲುಪಿಸುವ, ಅವರ ಬದುಕನ್ನು ಕಟ್ಟಿಕೊಡುವ ಉದ್ದೇಶದಿಂದ ಕೈಗೊಂಡಿರುವ *ಅಸಂಘಟಿತ ಕಾರ್ಮಿಕರ ಜಾಗೃತಿ ಅಭಿಯಾನವು ಹಾನಗಲ್ಲ ನಗರದ ಹಳೇ ಬಸ್ ನಿಲ್ದಾಣದ ಹತ್ತಿರ ನಡೆಯಿತು.*

ಅಸಂಘಟಿತ ಕಾರ್ಮಿಕರ ಜಾಗೃತಿ ಅಭಿಯಾನವು  ಸಮಾಜದ ದುಡಿಯುವ ವರ್ಗದ ಪ್ರತಿ ವ್ಯಕ್ತಿಯನ್ನು  ಸಂಪರ್ಕಿಸಿ,  ಜಾಗೃತಗೊಳಿಸಿ, ಸಂಘಟಿಸಿ, ಒಗ್ಗಟ್ಟಿಸಿ ಅವರ ಬದುಕನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಸೌಲಭ್ಯ ವಂಚಿತರಾಗಿರುವ ಕಾರ್ಮಿಕರಿಗೆ ಸೌಲಭ್ಯ ದೊರಕಿಸಿಕೊಡುವ ಪ್ರಯತ್ನ ಮಾಡುತ್ತಿದೆ. ಸರ್ಕಾರದಿಂದ ಘೋಷಣೆಯಾಗಿ ಜಾರಿಯಾಗದೇ ಇರುವ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಹೋರಾಟಕ್ಕೂ ಅಣಿಯಾಗಿಸುತ್ತಿದೆ.

 ಹಾವೇರಿ ಜಿಲ್ಲಾ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷರಾದ ನಿಯಾಜ್ ಶೇಖ್, ಪುರಸಭೆ ಸದಸ್ಯರು, ಹಿರಿಯ ಮುಖಂಡರಾದ ನಜೀರ್ ಅಹ್ಮದ್ ಸವಣೂರು, ಜಿಲ್ಲಾ  ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಹಿರೇಮಠ್,  ಪುರಸಭೆ ಸದಸ್ಯರಾದ ರವಿ ದೇಶಪಾಂಡೆ, ಹಿರಿಯ ಮುಖಂಡರಾದ ಕೆ.ಎಲ್.ದೇಶಪಾಂಡೆ, ಹಿರಿಯರಾದ ಶಬ್ಬೀರ್ ಸಾಬ್, ಮರ್ದಾನ್ ಸಾಬ್,ಜಾಫರ್ ಸಾಬ್,  ಕಾರ್ಮಿಕ ಮುಖಂಡರಾದ ಮೆಹಬೂಬ್ ಅಲಿ ನೆಗಳೂರು ಮತ್ತು ತಂಡ, ಕಾರ್ಮಿಕ ಮಹಿಳೆಯರು, ಯುವಕರು ಈ ಅಭಿಯಾನದಲ್ಲಿ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ 10 ಜನ ಕಾರ್ಮಿಕರಿಗೆ ಕಾರ್ಮಿಕರ ಗುರುತಿನ ಚೀಟಿಯನ್ನು ವಿತರಿಸಲಾಯಿತು. ಹಾಗೂ 200 ಜನ ಕಾರ್ಮಿಕರಿಗೆ ಗುರುತಿನ ಚೀಟಿಯನ್ನು ದೊರಕಿಸಿ ಕೊಡಲು ಸಹಕಾರಿಯಾದ *ಮೆಹಬೂಬ್ ಅಲಿ ನೆಗಳೂರು* ರವರನ್ನು ಸನ್ಮಾನಿಸಲಾಯಿತು.

ಹಾನಗಲ್ಲ- ಬಂಕಾಪುರ ರಸ್ತೆ ಕಾಮಗಾರಿಯಲ್ಲಿ ತೊಡಗಿರುವ ಅಸಂಘಟಿತ ಕಾರ್ಮಿಕರಲ್ಲಿ ಜಾಗೃತಿ ಅಭಿಯಾನ* ನಿಯಾಜ್ ಶೇಖ್

*ಹಾನಗಲ್ಲ- ಬಂಕಾಪುರ ರಸ್ತೆ ಕಾಮಗಾರಿಯಲ್ಲಿ ತೊಡಗಿರುವ ಅಸಂಘಟಿತ ಕಾರ್ಮಿಕರಲ್ಲಿ ಜಾಗೃತಿ ಅಭಿಯಾನ*

ಹಾನಗಲ್ಲ ತಾಲ್ಲೂಕಿನ ಮಾಸನಕಟ್ಟಿ, ಗಿರಿಸಿನಕೊಪ್ಪ, ಆಲದಕಟ್ಟಿ, ಹಾವೇರಿ ತಾಲ್ಲೂಕಿನ ಹೊಸಳ್ಳಿ, ಶಿಗ್ಗಾಂವ ತಾಲ್ಲೂಕಿನ ಗುಡ್ಡದ ಚನ್ನಾಪುರ ಗ್ರಾಮಗಳಿಂದ  ಹಾನಗಲ್ಲ- ಬಂಕಾಪುರ ರಸ್ತೆಯ ಕಾಮಗಾರಿಯಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರು ಯಾವತ್ತೂ ಕಾರ್ಮಿಕ ಇಲಾಖೆಯ ಮೆಟ್ಟಿಲು ತುಳಿದವರಲ್ಲ, ನಮಗಾಗಿ ಒಂದು ಕಾರ್ಮಿಕ ಇಲಾಖೆ ಇದೆ ಅನ್ನೋ ವಿಷಯವೇ ಗೊತ್ತಿಲ್ಲ, ರಣ ಬಿಸಿಲಿನಲ್ಲಿ  200, 300 ರೂಪಾಯಿ ಕೂಲಿಗಾಗಿ ತುತ್ತು ಅನ್ನಕ್ಕಾಗಿ, ಗೇಣು ಬಟ್ಟೆಗಾಗಿ, ಪುಟ್ಟ ಮನೆಗಾಗಿ, ಮಕ್ಕಳ ಶಿಕ್ಷಣ, ಆರೋಗ್ಯಕ್ಕಾಗಿ, ಒಂದು ಬದುಕು ಕಟ್ಟಿಕೊಳ್ಳುವ ಭರವಸೆಯಲ್ಲಿ ಇಡೀ ದಿವಸ ಬೆನ್ನು ಬಗ್ಗಿಸಿ, ಬೆವರು ಹರಿಸಿ ದುಡಿಯುವ ಜನರಿಗೆ ಈ ಎಲ್ಲಾ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸರ್ಕಾರ ಸಹಾಯ ಮಾಡುತ್ತದೆ ಎನ್ನುವ ಕಲ್ಪನೆ ಕೂಡ ಇರಲಿಲ್ಲ. ಒಂದೇ ದಿನಚರಿಯಲ್ಲಿ  ಬದುಕಿದವರು.. ಮನೆ-ಊಟದ ಗಂಟು-ಕೆಲಸ-ಮನೆ ಮತ್ತೆ ಅದೇ..  ಆದರೆ ಬದುಕು ಕಟ್ಟಿಕೊಳ್ಳಲು ಸಾದ್ಯ ಆಗಲಿಲ್ಲ.. ಇಂತಹ ಜನರ ಬದುಕನ್ನು ಕಟ್ಟಿಕೊಡಬೇಕು, ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ಹಾಗೂ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಭದ್ರತೆಯನ್ನು ಒದಗಿಸಿ ಕೊಡುವ ಉದ್ದೇಶದಿಂದ *ಅಸಂಘಟಿತ ಕಾರ್ಮಿಕರ ಜಾಗೃತಿ ಅಭಿಯಾನವು ರಸ್ತೆಯ ಕಾಮಗಾರಿಯಲ್ಲಿ ತೊಡಗಿದ್ದ ಎಲ್ಲಾ ಕಾರ್ಮಿಕರಲ್ಲಿ  ಜಾಗೃತಿ ಮೂಡಿಸಿತು.*

ಹಾವೇರಿ ಜಿಲ್ಲಾ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷರಾದ ನಿಯಾಜ್ ಶೇಖ್, ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಹಿರೇಮಠ ಹಾಗೂ ಕಾಮಗಾರಿಯಲ್ಲಿ ನಿರತ ಎಲ್ಲಾ ಕಾರ್ಮಿಕರು ಈ ಅಭಿಯಾನದಲ್ಲಿ ಪಾಲ್ಗೊಂಡು ನಾಳೆಯೇ ಕಾರ್ಮಿಕ ಇಲಾಖೆಗೆ ಭೇಟಿ ಕೊಡುವ ವಿಶ್ವಾಸ ವ್ಯಕ್ತಪಡಿಸಿದರು.

ಬ್ಯಾತನಾಳ ಗ್ರಾಮದಲ್ಲಿ ಅಸಂಘಟಿತ ಕಾರ್ಮಿಕರ ಜಾಗೃತಿ ಅಭಿಯಾನ* - ನಿಯಾಜ್ ಶೇಖ್

*ಬ್ಯಾತನಾಳ ಗ್ರಾಮದಲ್ಲಿ ಅಸಂಘಟಿತ ಕಾರ್ಮಿಕರ ಜಾಗೃತಿ ಅಭಿಯಾನ*

ಇಡೀ ಗ್ರಾಮವೇ ಕೂಲಿ ಕಾರ್ಮಿಕರಿಂದ ತುಂಬಿರುವ ಗ್ರಾಮ ಬ್ಯಾತನಾಳ. ಕೂಲಿ ಕೆಲಸದ ಮೇಲೆ ಇವರ ಜೀವನದ ನಿರ್ವಹಣೆ. ಇಂತಹ ಜನರ ಬದುಕನ್ನು ಕಟ್ಟಿಕೊಡುವ ಉದ್ದೇಶದಿಂದ ಅಸಂಘಟಿತ ಕಾರ್ಮಿಕರ ಜಾಗೃತಿ ಅಭಿಯಾನವು ರೂಪಗೊಂಡಿರುವುದು.  ಗ್ರಾಮದ ದುಡಿಯುವ ವರ್ಗದ ಪ್ರತಿ ವ್ಯಕ್ತಿಯನ್ನು ಕಾರ್ಮಿಕ ಇಲಾಖೆಗೆ ಜೋಡಿಸಿ, ಅವರ ಕಷ್ಟಗಳನ್ನು ಹಂಚಿಕೊಳ್ಳುವ, ಅವರ ಬದುಕಿಗೆ ಅಸರೆಯಾಗುವ, ಮಕ್ಕಳ ಶಿಕ್ಷಣ, ಆರೋಗ್ಯ, ವಸತಿ, ಆರ್ಥಿಕ, ಸಾಮಾಜಿಕ ಭದ್ರತೆ ಹಾಗೂ ಸರ್ಕಾರದ ಸೌಲಭ್ಯಗಳನ್ನು ಪ್ರತಿ ಕಾರ್ಮಿಕನ ಮನೆಗೆ ತಲುಪಿಸುವ ಉದ್ದೇಶದಿಂದ *ಅಸಂಘಟಿತ ಕಾರ್ಮಿಕರ ಜಾಗೃತಿ ಅಭಿಯಾನವು ಬ್ಯಾತನಾಳ ಗ್ರಾಮದಲ್ಲಿ ಜರುಗಿತು.* 
 
ಹಾವೇರಿ ಜಿಲ್ಲಾ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷರಾದ ನಿಯಾಜ್ ಶೇಖ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಫಯಾಜ್ ಅಹ್ಮದ್ ಲೋಹಾರ್, ಜಿಲ್ಲಾಪ್ರಧಾನ ಕಾರ್ಯದರ್ಶಿ ಎಸ್.ಎಸ್.ಹಿರೇಮಠ, ಪಂಚಾಯತಿ ಸದಸ್ಯರಾದ ಪಕ್ಕಿರಪ್ಪ, ಜಿಲ್ಲಾ  ಪ್ರಧಾನ ಕಾರ್ಯದರ್ಶಿ ಖಾದರ್ ಮೊಹಿದ್ದೀನ್ ಶೇಖ್, ಹಿರಿಯ ಮುಖಂಡರಾದ ಮುತ್ತಣ್ಣ ನಾಶಿಕ್, ಪಕ್ಕಿರಪ್ಪ ತಹಶೀಲ್ದಾರ್, ಮುದಿಯಣ್ಣನವರ, ಲೋಕೇಶ್, ರಿಯಾಜ್ ಅಹ್ಮದ್, ಗ್ರಾಮದ ಎಲ್ಲಾ ವರ್ಗದ ಕೆಲಸಗಾರರು ಅಭಿಯಾನದಲ್ಲಿ ಭಾಗವಹಿಸಿದ್ದರು.

 *ಅಭಿಯಾನದಲ್ಲಿ ಭಾಗವಸಿದ್ಧ ನೂತನ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಫಯಾಜ್ ಅಹ್ಮದ್ ಲೋಹಾರ್ ರವರನ್ನು  ಸನ್ಮಾನಿಸಲಾಯಿತು.*