*ಹಾನಗಲ್ಲ- ಬಂಕಾಪುರ ರಸ್ತೆ ಕಾಮಗಾರಿಯಲ್ಲಿ ತೊಡಗಿರುವ ಅಸಂಘಟಿತ ಕಾರ್ಮಿಕರಲ್ಲಿ ಜಾಗೃತಿ ಅಭಿಯಾನ*
ಹಾನಗಲ್ಲ ತಾಲ್ಲೂಕಿನ ಮಾಸನಕಟ್ಟಿ, ಗಿರಿಸಿನಕೊಪ್ಪ, ಆಲದಕಟ್ಟಿ, ಹಾವೇರಿ ತಾಲ್ಲೂಕಿನ ಹೊಸಳ್ಳಿ, ಶಿಗ್ಗಾಂವ ತಾಲ್ಲೂಕಿನ ಗುಡ್ಡದ ಚನ್ನಾಪುರ ಗ್ರಾಮಗಳಿಂದ ಹಾನಗಲ್ಲ- ಬಂಕಾಪುರ ರಸ್ತೆಯ ಕಾಮಗಾರಿಯಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರು ಯಾವತ್ತೂ ಕಾರ್ಮಿಕ ಇಲಾಖೆಯ ಮೆಟ್ಟಿಲು ತುಳಿದವರಲ್ಲ, ನಮಗಾಗಿ ಒಂದು ಕಾರ್ಮಿಕ ಇಲಾಖೆ ಇದೆ ಅನ್ನೋ ವಿಷಯವೇ ಗೊತ್ತಿಲ್ಲ, ರಣ ಬಿಸಿಲಿನಲ್ಲಿ 200, 300 ರೂಪಾಯಿ ಕೂಲಿಗಾಗಿ ತುತ್ತು ಅನ್ನಕ್ಕಾಗಿ, ಗೇಣು ಬಟ್ಟೆಗಾಗಿ, ಪುಟ್ಟ ಮನೆಗಾಗಿ, ಮಕ್ಕಳ ಶಿಕ್ಷಣ, ಆರೋಗ್ಯಕ್ಕಾಗಿ, ಒಂದು ಬದುಕು ಕಟ್ಟಿಕೊಳ್ಳುವ ಭರವಸೆಯಲ್ಲಿ ಇಡೀ ದಿವಸ ಬೆನ್ನು ಬಗ್ಗಿಸಿ, ಬೆವರು ಹರಿಸಿ ದುಡಿಯುವ ಜನರಿಗೆ ಈ ಎಲ್ಲಾ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸರ್ಕಾರ ಸಹಾಯ ಮಾಡುತ್ತದೆ ಎನ್ನುವ ಕಲ್ಪನೆ ಕೂಡ ಇರಲಿಲ್ಲ. ಒಂದೇ ದಿನಚರಿಯಲ್ಲಿ ಬದುಕಿದವರು.. ಮನೆ-ಊಟದ ಗಂಟು-ಕೆಲಸ-ಮನೆ ಮತ್ತೆ ಅದೇ.. ಆದರೆ ಬದುಕು ಕಟ್ಟಿಕೊಳ್ಳಲು ಸಾದ್ಯ ಆಗಲಿಲ್ಲ.. ಇಂತಹ ಜನರ ಬದುಕನ್ನು ಕಟ್ಟಿಕೊಡಬೇಕು, ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ಹಾಗೂ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಭದ್ರತೆಯನ್ನು ಒದಗಿಸಿ ಕೊಡುವ ಉದ್ದೇಶದಿಂದ *ಅಸಂಘಟಿತ ಕಾರ್ಮಿಕರ ಜಾಗೃತಿ ಅಭಿಯಾನವು ರಸ್ತೆಯ ಕಾಮಗಾರಿಯಲ್ಲಿ ತೊಡಗಿದ್ದ ಎಲ್ಲಾ ಕಾರ್ಮಿಕರಲ್ಲಿ ಜಾಗೃತಿ ಮೂಡಿಸಿತು.*
ಹಾವೇರಿ ಜಿಲ್ಲಾ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷರಾದ ನಿಯಾಜ್ ಶೇಖ್, ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಹಿರೇಮಠ ಹಾಗೂ ಕಾಮಗಾರಿಯಲ್ಲಿ ನಿರತ ಎಲ್ಲಾ ಕಾರ್ಮಿಕರು ಈ ಅಭಿಯಾನದಲ್ಲಿ ಪಾಲ್ಗೊಂಡು ನಾಳೆಯೇ ಕಾರ್ಮಿಕ ಇಲಾಖೆಗೆ ಭೇಟಿ ಕೊಡುವ ವಿಶ್ವಾಸ ವ್ಯಕ್ತಪಡಿಸಿದರು.
No comments:
Post a Comment