*ಬ್ಯಾತನಾಳ ಗ್ರಾಮದಲ್ಲಿ ಅಸಂಘಟಿತ ಕಾರ್ಮಿಕರ ಜಾಗೃತಿ ಅಭಿಯಾನ*
ಇಡೀ ಗ್ರಾಮವೇ ಕೂಲಿ ಕಾರ್ಮಿಕರಿಂದ ತುಂಬಿರುವ ಗ್ರಾಮ ಬ್ಯಾತನಾಳ. ಕೂಲಿ ಕೆಲಸದ ಮೇಲೆ ಇವರ ಜೀವನದ ನಿರ್ವಹಣೆ. ಇಂತಹ ಜನರ ಬದುಕನ್ನು ಕಟ್ಟಿಕೊಡುವ ಉದ್ದೇಶದಿಂದ ಅಸಂಘಟಿತ ಕಾರ್ಮಿಕರ ಜಾಗೃತಿ ಅಭಿಯಾನವು ರೂಪಗೊಂಡಿರುವುದು. ಗ್ರಾಮದ ದುಡಿಯುವ ವರ್ಗದ ಪ್ರತಿ ವ್ಯಕ್ತಿಯನ್ನು ಕಾರ್ಮಿಕ ಇಲಾಖೆಗೆ ಜೋಡಿಸಿ, ಅವರ ಕಷ್ಟಗಳನ್ನು ಹಂಚಿಕೊಳ್ಳುವ, ಅವರ ಬದುಕಿಗೆ ಅಸರೆಯಾಗುವ, ಮಕ್ಕಳ ಶಿಕ್ಷಣ, ಆರೋಗ್ಯ, ವಸತಿ, ಆರ್ಥಿಕ, ಸಾಮಾಜಿಕ ಭದ್ರತೆ ಹಾಗೂ ಸರ್ಕಾರದ ಸೌಲಭ್ಯಗಳನ್ನು ಪ್ರತಿ ಕಾರ್ಮಿಕನ ಮನೆಗೆ ತಲುಪಿಸುವ ಉದ್ದೇಶದಿಂದ *ಅಸಂಘಟಿತ ಕಾರ್ಮಿಕರ ಜಾಗೃತಿ ಅಭಿಯಾನವು ಬ್ಯಾತನಾಳ ಗ್ರಾಮದಲ್ಲಿ ಜರುಗಿತು.*
ಹಾವೇರಿ ಜಿಲ್ಲಾ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷರಾದ ನಿಯಾಜ್ ಶೇಖ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಫಯಾಜ್ ಅಹ್ಮದ್ ಲೋಹಾರ್, ಜಿಲ್ಲಾಪ್ರಧಾನ ಕಾರ್ಯದರ್ಶಿ ಎಸ್.ಎಸ್.ಹಿರೇಮಠ, ಪಂಚಾಯತಿ ಸದಸ್ಯರಾದ ಪಕ್ಕಿರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಾದರ್ ಮೊಹಿದ್ದೀನ್ ಶೇಖ್, ಹಿರಿಯ ಮುಖಂಡರಾದ ಮುತ್ತಣ್ಣ ನಾಶಿಕ್, ಪಕ್ಕಿರಪ್ಪ ತಹಶೀಲ್ದಾರ್, ಮುದಿಯಣ್ಣನವರ, ಲೋಕೇಶ್, ರಿಯಾಜ್ ಅಹ್ಮದ್, ಗ್ರಾಮದ ಎಲ್ಲಾ ವರ್ಗದ ಕೆಲಸಗಾರರು ಅಭಿಯಾನದಲ್ಲಿ ಭಾಗವಹಿಸಿದ್ದರು.
*ಅಭಿಯಾನದಲ್ಲಿ ಭಾಗವಸಿದ್ಧ ನೂತನ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಫಯಾಜ್ ಅಹ್ಮದ್ ಲೋಹಾರ್ ರವರನ್ನು ಸನ್ಮಾನಿಸಲಾಯಿತು.*
No comments:
Post a Comment