ಸ್ನೇಹಿತರೇ,
ಮಾತಾ ಭೂಮಿ ಪುತ್ರೋಹಂ ಪ್ರಥಿವ್ಯ,
ಸಮುದ್ರ ವಸನೆ ದೇವಿ ಪರ್ವತಸ್ತನ ಮಂಡಲೆ,
ವಿಷ್ಣುಪತ್ನಿ ನಮೋಸ್ತುಭ್ಯಂ ಪಾದಸ್ಪರ್ಶಂ ಕ್ಷಮಚ್ಚಾಮೆಂ.
ಇದು ಭೂಮಿಯ ಪ್ರತಿ ನಮ್ಮ ಅಭಿಮಾನ. ಹಾನಗಲ್ಲ ನಮ್ಮ ಜನ್ಮ ಭೂಮಿ,
ಧನಿಕ ಶ್ರೋತ್ರಿಯೋ ರಾಜ ನದಿ ವೈದ್ಯಸ್ತು ಪಂಚಮಃ,
ಪಂಚಯತ್ರನವಿದ್ಯಂತೆ ತತ್ರವಸಂ ನ ಕಾರಯೆತ್.
ಸಮಾಜದಲ್ಲಿ ಧನ, ಶಿಕ್ಷಣ, ಶಾಸಕ, ನೀರು,ಆರೋಗ್ಯ ಈ ಪಂಚಗಳು ಅವಶ್ಯ. ಈ ಪಂಚಗಳು ತನ್ನ ಸ್ಥಾನದಲ್ಲಿ ಸರಿಯಾಗಿ ಇದ್ದರೆ ಸಮಾಜ ಸುಸ್ತಿತಿಯಲ್ಲಿರುತ್ತದೆ. ಒಂದುವೇಳೆ ಸುಸ್ತಿಯಲ್ಲಿ ಇಲ್ಲದೆ ಹೋದರೆ ಅದನ್ನು ಸರಿಯಾಗಿಸುವುದು ಸರ್ಕಾರದ ಹೊಣೆ. ರಾಷ್ಟ್ರ ರಕ್ಷಣೆ ಸರಕಾರದ ಹೊಣೆ. ಸಮಾಜದ ರಕ್ಷಣೆ ಸರಕಾರದ ಜವ್ಬಾದಾರಿ. ಹಾಗಾದರೆ ನಮ್ಮ ಜವ್ಬಾದಾರಿಗಳೇನು?? ಸರಕಾರ ಮತ್ತು ಸಮಾಜದ ಮುಖ್ಯವಾದ ಭಾಗವೇ ನಾವು. ಅಂದ್ರೆ ಮುಖ್ಯವಾದ ಜವಾಬ್ದಾರಿಗಳು ನಮ್ಮವೆ.
ಸಮಾಜಕ್ಕೆ ನಷ್ಟವಾಗಿರುವುದು ಯಾರಿಂದ ಗೊತ್ತೇ? ಅದು ನಮ್ಮಿಂದ, ನಮ್ಮ ಮೌನದಿಂದ,ನಮ್ಮ ನಿಷ್ಕ್ರೀಯತೆಯಿಂದ, ಪ್ರಶ್ನೆ ಮಾಡುವ ಶಕ್ತಿ ಇಲ್ಲದಿರುವುದರಿಂದ, ನಮ್ಮ ಜವ್ಬಾದಾರಿಯನ್ನು ಅರಿಯದೆ ಇರುವುದರಿಂದ. ಅಭಿವೃದ್ದಿಯು ನಮ್ಮ ಮೇಲೆ ಅವಲಂಭಿತವಾಗಿದೆ ಹಾನಗಲ್ಲ ಮೇಲಲ್ಲ. ಬದಲಾವಣೆ ನಮ್ಮ ಮೇಲೆ ಅವಲಂಭಿತವಾಗಿದೆ ಹಾನಗಲ್ಲ ಮೇಲಲ್ಲ. ಅಂದ್ರೆ ಪರಾಜಯ ನಮ್ಮದೇ ಹಾನಗಲ್ಲನದಲ್ಲ. ಹಿಂದುಳಿದಿರುವುದು ನಾವೆ ಹಾನಗಲ್ಲ ಅಲ್ಲ.ಇಲ್ಲಿ ಶಿಕ್ಷಣ ಇಲ್ಲದಿರುವುದು ನಮಗೇ ಹಾನಗಲ್ಲಗೆ ಅಲ್ಲ. ಇಲ್ಲಿ ಆರೋಗ್ಯ ಇಲ್ಲದಿರುವುದು ನಮಗೇ ನಮ್ಮ ಊರಿಗೆ ಅಲ್ಲ.ಇಲ್ಲಿನ ವ್ಯವಸ್ಥೆಯ ಕಾರಣಿಭೂತರು ನಾವೆ. ಪ್ರಶ್ನೆ ಸಮಾಜದ್ದಾಗಿರುವಾಗ ನಾವು ಹೇಗೆ ಸಮಾಜದಿಂದ ಬೇರೆಯಾಗಲು ಸಾಧ್ಯ??
ಈ ಎಲ್ಲ ಇಲ್ಲದಿರುವುದನ್ನು ಪಡೆಯುವುದು ಕಷ್ಟವಲ್ಲ. ಅದಕ್ಕೆ ನಮ್ಮಲ್ಲಿ ಎಲ್ಲವೂ ಇದೆ, ಇಲ್ಲದೇ ಇರುವುದು ಒಂದೇ ಅದು ಪ್ರಶ್ನೆ ಮಾಡುವ ಸಾಮರ್ಥ್ಯ.
ಅಭಿವೃದ್ದಿಯ ನಿರೀಕ್ಷೆಯಲ್ಲಿರುವ ಹಾನಗಲ್ಲಿಗೆ ನಿಮ್ಮೆಲ್ಲ ಅವಶ್ಯಕತೆ ಇದೆ. ಭ್ರಷ್ಟಾಚಾರದ ವಿರುದ್ದ ಎದ್ದು ನಿಲ್ಲುವ ಅವಶ್ಯಕತೆ ಇದೆ.ವ್ಯಕ್ತಿಯನ್ನು ವ್ಯಕ್ತಿಯಿಂದ ಜೋಡಿಸುವ ಅಗತ್ಯ ಇದೆ.ಒಂದು ಆಂದೋಲನದ ಅವಶ್ಯಕತೆ ಇದೆ. ಒಂದು ಬದಲಾವಣೆಯ ಅವಶ್ಯಕತೆ ಇದೆ. ನೀರಿನ ಒಂದು ಹನಿಗೂ ಸಮುದ್ರದ ಬಲ ತುಂಬುವ ಅಗತ್ಯ ಇದೆ.ವಾಸ್ತವವನ್ನು ಅರಿಯುವ ಅಗತ್ಯ ಇದೆ. ಒಂದು ಅಸ್ಮಿತೆಯೊಂದನ್ನು ನಿರ್ಮಿಸುವ ಅಗತ್ಯ ಇದೆ. ಪ್ರತಿಯೊಬ್ಬರ ಸಹಯೋಗದ ಅಗತ್ಯ ಇದೆ.
ಪರಿವರ್ತನೆಯ ನಿರೀಕ್ಷೆಯಲ್ಲಿರುವ ಹಾನಗಲ್ಲಿಗೆ ಒಂದು ಸಂಕಲ್ಪದ ಅವಶ್ಯಕತೆ ಇದೆ.
ಹಾನಗಲ್ಲಿನ ಆಡಳಿತ ನಿರ್ವಹಣೆಯ ಬಗ್ಗೆ ಆಕ್ಷೇಪವಿದೆ,ಅಸಮಾಧಾನವಿದೆ.ಭ್ರಷ್ಟಾಚಾರ ಮುಗಿಲು ಮುಟ್ಟಿದೆ.ಜನರು ವ್ಯವಸ್ಥೆಯ ಮುಂದೆ ಭಿಕ್ಷೆ ಬೇಡುವಂತಾಗಿದೆ.
ಅಧಿಕಾರಿಗಳ ದಬ್ಬಾಳಿಕೆಗೆ ಜನ ನಲುಗಿ ಹೋಗಿದ್ದಾರೆ.ಲಂಚವಿಲ್ಲದೆ ಕೆಲಸ ಮಾಡಿಕೊಡುವುದಿಲ್ಲ. ಎಲ್ಲ ಇಲಾಖೆಗಳಲ್ಲಿ ಜನರನ್ನು ಸುಲಿಗೆ ಮಾಡುತಿದ್ದಾರೆ. ಎಲ್ಲ ಕಛೇರಿಗಳಲ್ಲಿ ನೆಡೆಯುವ ಭ್ರಷ್ಟಾಚರವನ್ನು ಬಯಲಿಗೆಳೆಯಬೇಕು. ವ್ಯಕ್ತಿಯನ್ನು ವ್ಯಕ್ತಿಯಿಂದ ಜೋಡಿಸಬೇಕು, ಒಂದು ಮಹಾ ಆಂದೋಲನವಾಗಬೇಕು. ಜನಶಕ್ತಿಯ ವಿರುದ್ಧ ಮಾತನಾಡುವ ಸಾಮರ್ಥ್ಯ ಈ ಭ್ರಷ್ಟರಲ್ಲಿ ಇದೆಯೇ? ನಮ್ಮ ವಿರುದ್ದ ತಿರುಗಿ ಬೇಳುವ ಸಾಮರ್ಥ್ಯ ನಿಮ್ಮಲ್ಲಿ ಇದೆಯೇ?? ಭ್ರಷ್ಟರೇ, ಇದು ನಿಮಗೆ ಎಚ್ಚರಿಕೆಯ ಗಂಟೆ. ಇನ್ನಾದರೂ ಎಚ್ಚೆತ್ತುಕೊಳ್ಳಿ. ಜನಮಾನಸದಲ್ಲಿ ಸ್ಪೋಟಕ್ಕೆ ಅವಕಾಶ ಕೊಡಬೇಡಿ.
ಹಾನಗಲ್ಲನ್ನು ಅಭಿವ್ರುದ್ಧಿ ಮಾಡಲು ಸರ್ಕಾರಕ್ಕೆ ಎಷ್ಟು ವರ್ಷಗಳು ಬೇಕಾಗಿತ್ತು?? ಐದು,ಹತ್ತು,ಇಪ್ಪತ್ತು...ಎಷ್ಟು ಬೇಕಾಗಿತ್ತು?? ನಾವು ಚಿಕ್ಕವರಿಂದ ಬೆಳೆದು ದೊಡ್ಡವರಾಗಿ ಹೋದೆವು. ನಮ್ಮ ಅಜ್ಜ ಅಜ್ಜಿಯರೆಲ್ಲ ತೀರಿ ಹೋಗಿ ಶತಮಾನಗಳು ಉರುಳಿ ಹೋದವು. ಭ್ರಷ್ಟಾಚಾರ, ಅರಾಜಕೀಯತೆ, ದೌರ್ಜನ್ಯ, ದಬ್ಭಾಳಿಕೆ ಇವೆಲ್ಲವೂ ಮಾಡುವವರಿದ್ದಾರೆ ಅಂತ ಅಲ್ಲ.ಅದನ್ನು ಸಹಿಸುವವರಿದ್ದಾರೆ ಅದಕ್ಕೆ ಅವರು ಮಾಡ್ತಾ ಇದ್ದಾರೆ ಎಂಬುದನ್ನು ನಾವು ತಿಳಿಯ ಬೇಕಾಗಿದೆ.
ಆಡದೆಲೆ ಕೊಡುವವನು ರೂಢಿಯೊಳಗುತ್ತಮನು
ಆಡಿ ಕೊಡುವವನು ಮಧ್ಯಮನು
ತಾನಾಡಿ ಕೊಡದವನು ಅಧಮನು ಸರ್ವಜ್ನ.
ಅಧಮ ಈ ಮಾತನಾಡುವ ಸರ್ಕಾರ,ಅಧಮರು ಈ ಮಾತನಾಡುವ ಶಾಸಕರು, ಅಧಮರು ಈ ಭ್ರಷ್ಟ ಅಧಿಕಾರಿಗಳು. ಪ್ರಾರ್ಥನೆ ಮಾಡದೆ ದೇವರು ಕೂಡ ಪ್ರತ್ಯಕ್ಷನಾಗಲ್ಲ ಹೀಗಿದ್ದಾಗ ನಮ್ಮ ಅಧಿಕಾರವನ್ನು ನಾವೇ ಕೇಳಿ ಪಡ್ಕೋಬೇಕು. ಈ ಮಾತನಾಡುವ ಶಾಸಕರು, ಮಾತನಾಡುವ ಸರ್ಕಾರ ನಮಗೆ ಏನೂ ಮಾಡಿ ಕೊಡಲ್ಲ. ಹಾನಗಲ್ಲಿನ ಅಧಿಕಾರವನ್ನು ನಾವು ಪದೆ ಪದೆ ಕೇಳಬೇಕು. ಹಾನಗಲ್ಲಿನ ಭವಿಷ್ಯದಲ್ಲಿ ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ಇದೆ.ನಮ್ಮ ನಿರ್ಧಾರದಲ್ಲಿ ಹಾನಗಲ್ಲಿನ ಅಭಿವೃದ್ಧಿ ಇದೆ.
ಶಾಸಕನ ಜವಾಬ್ದಾರಿಯನ್ನು ಮರೆತು ಹೋಗಿರುವ ಶಾಸಕ, ಶಾಸನವನ್ನು ಅರಿಯದ ಶಾಸಕ, ಅಧಿಕಾರವನ್ನು ದುರುಪಯೋಗ ಮಾಡುವ ಅಧಿಕಾರಿ, ಇವರಿಂದ ಶಾಸಿತ ಜನ ಸಮಾಜ, ನಮ್ಮ ಊರು, ಇಲ್ಲಿನ ಆರೋಗ್ಯ,ಇಲ್ಲಿನ ಶಿಕ್ಷಣ, ಇಲ್ಲಿನ ಮೂಲ ಸೌಕರ್ಯಗಳು ಎಂದೂ ಅಭಿವ್ರುದ್ಧಿಯಾಗಲ್ಲ. ಅದಕ್ಕೆ ನಾವು ನಮ್ಮ ಜವಾಬ್ದಾರಿಯನ್ನು ಅರಿತು ನೆಡೆಯಬೇಕು. ಮಿದುಳು ಶರೀರದ ಮೇಲ್ಭಾಗದಲ್ಲಿದೆ ಯಾಕಂದ್ರೆ ಅವಶ್ಯಕತೆ ಬಿದ್ದಲ್ಲಿ ಅದು ಸಂಪೂರ್ಣ ಶರೀರವನ್ನು ನಿಯಂತ್ರಣ ಮಾಡುತ್ತೆ. ಹಾಗಾಗಿ ಯೋಚನೆ ಮಾಡುವ ಕಾಲ ಬಂದಿದೆ. ವಿವೇಕವನ್ನು ಅರಿತು ನಾವು ಹಾನಗಲ್ಲಿನ ಪರಿವರ್ತನೆಗೆ ಕೈ ಜೋಡಿಸಬೇಕು.
ಬದಲಾವಣೆಯ ನಿರೀಕ್ಷೆಯಲ್ಲಿರುವ ಈ ಹಾನಗಲ್ಲ ನಿಮ್ಮ ಸಂಪೂರ್ಣ ಸಹಯೋಗವನ್ನು ಅಪೇಕ್ಷೆ ಮಾಡುತ್ತೆ. ಭ್ರಷ್ಟಾಚಾರದ ವಿರುದ್ದ ನಿಮ್ಮ ಸಂಕಲ್ಪವನ್ನು ಕೇಳುತ್ತೆ. ನಾವೆಲ್ಲರೂ ಸಂಪೂರ್ಣ ಸಹಯೋಗ,ಸಹಕಾರ ನೀಡಿದ್ದೇ ಆದರೆ, ಬದಲಾವಣೆಯ ಸಂಕಲ್ಪ ಮಾಡಿದ್ದೇ ಆದರೆ ಹಾನಗಲ್ಲ ತನ್ನ ಪರಿವರ್ತನೆಯ ನಿರೀಕ್ಷೆಯಲ್ಲಿ ಹತ್ತು ಹೆಜ್ಜೆ ಅಲ್ಲ ಅರ್ಧ ದಾರಿ ಮುಂದೆ ಹೋದಂತೆ.
ಇಂತಿ,
ಪರಿವರ್ತನೆಯ ನಿರೀಕ್ಷೆಯಲ್ಲಿರುವ ಹಾನಗಲ್ಲ

No comments:
Post a Comment