Saturday, 29 October 2016

ಜನಸಾಮಾನ್ಯ- ಆಮ್ ಆದ್ಮಿ
ಭಾರತದ ರಾಜಕೀಯದಲ್ಲಿ ಹೊಸ ತಿರುವನ್ನು ಸೃಷ್ಟಿ ಮಾಡಿದವನು ಆಮ್ ಆದ್ಮಿ,
ಪ್ರಜಾಪ್ರಭುತ್ವದಲ್ಲಿ ಜನಸಾಮಾನ್ಯನ ಅಸ್ತಿತ್ವ ಮತ್ತು ರಾಜಕೀಯ ಅರ್ಹತೆ ಇದೆಯೇ ಎಂಬ ಪ್ರಶೆಗೆ ಉತ್ತರವಾಗಿ ಜನ್ಮಿಸಿದ ಆಂದೋಲನ.
ಪ್ರಜೆಗಳ ಅಭಿಪ್ರಾಯಗಳನ್ನು,ಬೇಡಿಕೆಗಳನ್ನು ಗಣನೆಗೆ ತೆಗೆದುಕೊಳ್ಳುವುದು,ಈಡೇರಿಸುವುವುದು ಸರ್ಕಾರದ ಕೆಲಸ. ಜನಸಾಮಾನ್ಯರು ನಗಣ್ಯ, ಸಮಾಜವೇ ನಗಣ್ಯವಾದರೆ ಅದು ಒಂದು ಆಂದೋಲನಕ್ಕೆ ನಾಂದಿ ಹಾಡುತ್ತೆ ಅನ್ನೋದಕ್ಕೆ ಆಮ್ ಆದ್ಮಿ ಪಾರ್ಟಿಯೇ ಉದಾಹರಣೆ.
ಸಮಾಜ ಎಲ್ಲರಿಗಿಂತಲೂ ದೊಡ್ಡದು, ಸಮಾಜ ರಾಜಕೀಯಕ್ಕಿಂತಲೂ ದೊಡ್ಡದು, ಜನಸಾಮಾನ್ಯರ ವಿಷಯದಲ್ಲಿ ರಾಜಕೀಯ ಮಾಡುವುದು ತರವಲ್ಲ ಅಂತ ಗೊತ್ತಾಗಿದ್ದು ಆಮ್ ಆದ್ಮಿಯ ಸರ್ಕಾರ ಬಂದ ಮೇಲೆ. ನಿಧಾನವಾಗಿ ಬೀಳುವ ನೀರು ಕಲ್ಲು ಬಂಡೆಯನ್ನು ನಾಶ ಮಾಡುವಂತೆ, ಹೊಸ ವ್ಯವಸಾಠೆ ನಿರ್ಮಾಣವಾಗಿದೆ, ನಿಧಾನವಾಗಿ ಬೀಳುವ ನೀರು ಜಲಪಾತವಾಗುವಂತೆ ಒಬ್ಬೊಬ್ಬ ಜನಸಾಮಾನ್ಯ ಸೇರಿ ದೇಶಾದ್ಯಂತ ಬದಲಾವಣೆಯ ಆಂದೋಲದಲ್ಲಿ ಭಾಗಿಯಾಗುತಿದ್ದಾರೆ.
ದೆಹಲಿಯಲ್ಲಿ ಜನಸಾಮಾನ್ಯರ ಸರ್ಕಾರ ರಚನೆಗೊಂಡಿದೆ. ದೇಶಾದ್ಯಂತ ಆಮ್ ಆದ್ಮಿಯ ಸಂಘಟನೆಗೊಳ್ಳುತ್ತಿದೆ.
ಅರಾಜಕೀಯತೆ,ಭ್ರಷ್ಟಾಚಾರ,ಅಧಿಕಾರದ ದುರ್ಬಳಕೆ,ರಾಜಕೀಯ ವಂಶ ಪಾರಂಪರ್ಯ ಎಲ್ಲವೂ ತನ್ನ ಎಲ್ಲೆ ಮೀರಿ, ಜನಸಾಮಾನ್ಯರ ಬದುಕನ್ನು ಶೋಷಣೆ ಮಾಡಿದಾಗ,ಜನಸಾಮಾನ್ಯ ತನ್ನ ಅಸ್ಥಿತ್ವವನ್ನು ನಿರೂಪಿಸಿದ್ದಾನೆ.
ಆಮ್ ಆದ್ಮಿ ದೆಹಲಿಯಲ್ಲಿ ಜಯಭೇರಿ ಗಳಿಸಿ, ಪಂಜಾಬ ಮತ್ತು ಗೋವಾ‌ಗಳಲ್ಲಿ ಜಯದತ್ತ ದಾಪುಗಾಲು ಇಡುತ್ತಾ ಇದೆ. ಕರ್ನಾಟಕದಲ್ಲಿ ತನ್ನ  ಬುನಾದಿಯನ್ನು ಭದ್ರಗೊಳಿಸುತ್ತಿದೆ.
ಪದ್ಮಾಕರಂ ದಿನಕರೋ ವಿಚೀಕರೋತಿ
ಚಂದ್ರೋ ವಿಕಾಸಯತಿ ಕೈರವಚಕ್ರವಾಲಂ
ನಾಭ್ಯರ್ಥಿತೋ ಜಲಧಿರೋಪಿ ಜಲಂದ ದಾತಿ
ಸಂತ ಸ್ವಯಂ ಪರಹಿತೇಷು ಕ್ರುತಾಭಿಯೋಗಾಃ
ಕಮಲಗಳ ಗುಂಪನ್ನು ಸೂರ್ಯನು ಅರಳಿಸುತ್ತಾನೆ, ನೈದಿಲೆಯ ಗುಂಪನ್ನು ಚಂದ್ರನು ಅರಳಿಸುತ್ತಾನೆ, ಯಾರು ಬೇಡದಿದ್ದರೂ ಮೋಡಗಳು ಮಳೆಯನ್ನು ಸುರಿಸುತ್ತವೆ, ಸಜ್ಜನರು ಸ್ವತಃ ಸಮಾಜದ ಹಿತಕ್ಕಾಗಿ ಮುಂದೆ ಬರುತ್ತಾರೆ.
2018ರ ಚುನಾವಣೆ ಸಮೀಪಿಸುತ್ತಿದೆ, ಸಜ್ಜನರ ನಾಯಕತ್ವದ ಅವಶ್ಯಕತೆ ಇದೆ.ಸಮಾಜವನ್ನು ಅರ್ಥ ಮಾಡಿಕೊಳ್ಳಬಲ್ಲ ಶುದ್ಧ ಅಂತಃಕರಣ ಸ್ವಭಾವದವರು ಮುಂದೆ ಬರಬೇಕು.ಆಂದೋಲನದ ನೇತಾರರಾಗ ಬಯಸುವವರು ಮುಂದೆ ಬರಬೇಕು.ಜನಸಾಮಾನ್ಯರೇ ನಾಯಕತ್ವ ವಹಿಸಬೇಕು.
 ಸಮಾಜದ ನಿರಂತರ ಪುನರ್ರಚನೆಯೇ  ಅಭಿವೃದ್ಧಿ, ಆಲೋಚನೆಯಲ್ಲಿ,ಮನಸ್ಥಿಯಲ್ಲಿ ನಿರಂತರ ಪುನರ್ರಚನೆಯೇ ಶಿಕ್ಷಣ, ವಿಚಾರಕ್ರಾಂತಿಯೇ ಬದಲಾವಣೆ,ಸಾಮಾಜಿಕ ಧೋರಣೆ ಪುನರ್ರಚನೆಯೇ ಸಮಾಜ ನಿರ್ಮಾಣ. ದೂರದರ್ಶಿತ್ವವೇ ಮಾರ್ಗ ಈ ಬದಲಾವಣೆಗೆ, ಸುಸಮಾಜ ನಿರ್ಮಾಣಕ್ಕೆ ಎಲ್ಲರ ಸಹಯೋಗ ಅವಶ್ಯಕ. ದೇಶಭಕ್ತರಿಗೆ,ಸಮಾಜ ಸುಧಾರಕರಿಗೆ,ಸಜ್ಜನರಿಗೆ,ಯುವಕರಿಗೆ ನನ್ನದೊಂದು ಕರೆಯಿದೆ. ಬನ್ನಿ ಆಂದೋಲನದಲ್ಲಿ ಭಾಗಿಯಾಗಿ,


No comments:

Post a Comment